ಸಖಿಯೊಬ್ಬಳ ಸ್ವಗತ


ಎಲ್ಲಾ ಗೆಳತಿಯರಿಗೂ ವಯಸ್ಸಾಗುತ್ತಿದೆ
ಕಪ್ಪುಕೂದಲ ನಡುವೆ ಬೆಳ್ಳಿ ಮೂಡಿದೆ

ಹರೆಯದ ಆಕರ್ಷಣೆಗೀಗ ಮಂಕು 
ಮೇಕಪ್ಪಿನಿಂದಾಚೆ ನೆರಿಗೆಯ ಕೊಂಕು 

ಹೆಚ್ಚುವರಿ ಜವಾಬ್ದಾರಿಯ ಹೊರೆ 
ದಟ್ಟ ಕೇಶರಾಶಿಗೆ ಬರೆ  

ಹಳೆಯ ಹುಡುಗನ ನೆನಪು
ಮಾಯವಾಗಿದೆ ಕಣ್ಣಿನ ಹೊಳಪು

ಕನಸುಗಳ ಸೋಲು  
ವಾಸ್ತವದ ಸವಾಲು 

ಕೆಲವರಿಗೆ ಪಶ್ಚಾತ್ತಾಪದ ಬೇಗೆ 
ಇನ್ನುಳಿದವರಿಗೆ ವಿಷಾದದ ನಗೆ 

ಎಲ್ಲರಿಗೂ ಸಮಯದ ಅಭಾವ 
ಆಧುನಿಕ ಜೀವನ ಶೈಲಿಯ ಪ್ರಭಾವ 

ಅಂದಿನ ಜೀವದ ಗೆಳತಿಯರೆ 
ಇಂದು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ 

ತಿರುಗಾಟದ ದಣಿವು ಹೆಚ್ಚಿದೆ 
ಬಿಪಿ ನೂರೆಂಭತ್ತಕ್ಕೇರಿದೆ 

ಕೆಲಸದೊತ್ತಡದ ಶೂಲ
ಹೆಗಲೇರಿದೆ ಅನಾರೋಗ್ಯದ ಸಾಲ

ಇನ್ನೂ ಉಳಿದಿವೆ ಮುಗಿಸಬೇಕಾದ ಕಾರ್ಯ 
ಇದು ಜೀವನದ ಅನಿವಾರ್ಯ 

- ಮೋಹನ್ ಮೂರ್ತಿ ಮಾ. ಕೆಂ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ