ಹಳೇ ಹುಡುಗಿ ನೆನಪುಗಳ
ಕೊಲ್ಲುವುದು ಕಡುಕಷ್ಟ
ದಿನವೂ ಆಲೋಚನೆಗಳಲ್ಲಿ
ನುಸುಳಿ ನೆಮ್ಮದಿ ನಷ್ಟ
ಅಷ್ಟು ಸುಲಭಕ್ಕೆ ಬಗ್ಗುವ
ಆಸಾಮಿಯಲ್ಲ ನಾನು !
ಅದಮ್ಯ ಇಚ್ಛಾಶಕ್ತಿಯ ಬಳಸಿ
ಆಲೋಚನೆಗಳಿಂದ ನಿರ್ಬಂಧಿಸಿರುವೆನು ಅವಳನ್ನು
ಅವಳೇನು ಸಾಮಾನ್ಯಳಲ್ಲ !
ಕನಸುಗಳಲ್ಲಿ ಬಂದು ಕಾಡುತ್ತಾಳಲ್ಲ !
ಯಾರಾದರೂ ಕನಸುಗಳ ನಿಯಂತ್ರಿಸುವ ಬಗೆ ಹೇಳಿ
ದಯಮಾಡಿ ಪುಣ್ಯ ಕಟ್ಟಿಕೊಳ್ಳಿ.
- ಮೋಹನ್ ಮೂರ್ತಿ ಮಾ ಕೆಂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ